ಅಲ್ಲಿರುವುದು ನಮ್ಮ ಮನೆ

ಮನ ಹೇಳಿತು ಮಾಡು ಒಂದು ಮನೆ, ಇರಲಿ ಸುಮ್ಮನೆ,
ಮತ್ತೆ ತೋರಿತು ಯಾಕೀಗ ಮನೆ ಸುಮ್ಮನೆ,
ದಾಸರಂದಂತೆ ‘ಅಲ್ಲಿರುವುದು ನಮ್ಮ ಮನೆ ,ಇಲ್ಲಿರುವುದು ಸುಮ್ಮನೆ!’

ಇಲ್ಲಿ ಕಟ್ಟಿದರೂ ಅರಮನೆ,
ಕೊಂಡೊಯ್ಯಲಾಗುತ್ತದಯೇ ಈ ಮನೆ, ಮಣ್ಣಿನಮೇಲಿನ ಆಸೆ ನಮಗೆ, ಮಣ್ಣಾಗುವ ತನಕ,
ಕಣ್ಣಿನ ಮುಂದೆಯೇ ಕಣ್ಮರೆಯಾಗುತ್ತಿರುವರ,
ಜೀವನ ನೋಡಿ ಕಲಿಯ ಬೇಡವೇ ನಾವು.

ಅಂತ್ಯದಲಿ ಎಲ್ಲ ಶೂನ್ಯವಾಗಿ ಹೋಗುವಾಗ,
ಅಂತರಂಗದಲಿ ‘ನರಹರಿ’ ಸ್ಮರಣೆಯೇ ಆಸ್ತಿ,
ಸಂತರಂತೆ ವೈರಾಗ್ಯ ಬೆಳೆಸಲು ಪ್ರಯತ್ನಿಸಿ,
ಕುಂತೀಸುತ ಪ್ರಿಯ ಕೃಷ್ಣನ ಪಾದ ಸೇರಲು ಆಶಿಸಿ.

– ಮ. ಅ .ನ .
M.An.Na. 05.05.2022


ಪುಣ್ಯಸ್ಮರಣೆ

ಪೆರಿಯಾಳ್ವಾರ್ ಬೆಳೆಸಿ ಪೋಷಿಸಿದ ಆಂಡಾಳ್ ದೇವಿಯಂತೆ,
ತಂದೆ ಸುದರ್ಶನಾಚಾರ್ಯರ ಪೋಷಣೆಯಲಿ ತಾಯಿ ಶ್ರೀವರಮಂಗೈ ಪ್ರೀತಿಕಂಡು,
ಚಿಕ್ಕಪ್ಪನವರ ಸಂಸಾರದಲಿ ಒಂದಾಗಿ ಬೆಳೆದ ಕನ್ಯಾಮಣಿ
ಗೋದಾವಿಗೆ,
ಚಿಕ್ಕವಯಸ್ಸಿನಿಂದಲೇ ಕಾವ್ಯ, ಕಾದಂಬರಿ, ಸಾಹಿತ್ಯದಲ್ಲಿ ಅತಿರುಚಿ.

ಹದಿನಾರರ ಹರೆಯದಲ್ಲಿ
ಹಿರಿಯ ಮನೆತನಕ್ಕೆ ಕೊಟ್ಟು ಮದುವೆ,
ಆಳ್ವಾರ್ ಸ್ವಾಮಿಗಳ ಆಶೀರ್ವಾದ, ಅಮ್ಮಂಗಾರ್ ಶಿಂಗಮ್ಮನವರ ನೇತೃತ್ವದಲಿ,
ಜವಾಬ್ದಾರಿ ವಹಿಸಿ ಅತಿದಕ್ಷತೆಯಿಂದ
ನಿರ್ವಹಿಸಿದ ಧೀರ ರಮಣಿ,
ಪತಿ ಲಕ್ಷೀತಾತಾಚಾರ್ಯರ ಅನಿಮಿತ ಯೋಜನೆಗಳಿಗೆ ಸಹಕರಿಸಿದ ಶ್ರೀಮತಿ.

ತಿರುನಾರಾಯಣನ ಹಾಗೂ ಆಚಾರ್ಯರುಗಳ ಸೇವೆ ನಿರತವಾಗಿ ನಡೆಸಿ,
ಶೆಲ್ವಪ್ಪಿಳ್ಳೆಗೆ ದಶಾವತಾರದ ಸುಂದರ ಕಲೆಗಳ ವೆಲ್ವೆಟ್ ಕವಚದ ಉಡುಗೆಗಳ ನಿರ್ಮಿಸಿ ಧರಿಸಿ,
ಇಷ್ಟೆಲ್ಲ ಕಾರ್ಯಭಾರಗಳಲ್ಲೂ ಕವನ ,ಕಥೆ, ಪುಸ್ತಕಗಳ ಬರೆಯುವ ಹವ್ಯಾಸ ಬಿಡದೆ ನಡೆಸಿ,
ಸಂಪೂರ್ಣ ಜೀವನ ಸಂತೃಪ್ತಿಯಾಗಿ ನಡೆಸಿ
ಧನ್ಯಳಾದ ದೈವಭಕ್ತೆ ಗೋದಾ.

ಪತಿಯ ವಜ್ರಮಹೋತ್ಸವ ನೆರವೇರಿಸಿ ಸಂತೋಷಿಸಿ,
ಜ್ಯೇಷ್ಠಪುತ್ರ ಆಳ್ವಾರ್ನ್ನ ಮುಂದಿನಸ್ವಾಮಿಪಟ್ಟಕ್ಕೆ ಸಿದ್ದಪಡಿಸಿ,
ಮನೆಯ ಹಾಗೂ ಶಿಷ್ಯರೆಲ್ಲರ ಪ್ರೀತಿಪಾತ್ರಳಾಗಿ ಮೆಚ್ಚುಗೆ ಗಳಿಸಿ, ಅರವತ್ತು ವರುಷಗಳ ಮುಂಚೆಯೇ ಆಚಾರ್ಯರ ಪಾದಕಮಲಗಳನು , ನರಹರಿ ಕೃಪೆಯಿಂದ ತುಲಾಸಂಕ್ರಮಣದ ಪುಣ್ಯದಿನದಂದು ಹೊಂದಿದ ಪುಣ್ಯವತಿ

ಶ್ರೀಮತಿ ಗೋದಾದೇವಿಗೆ ನಮ್ಮ ನಮನಗಳು.

– ಮ. ಅ .ನ .
M.An.Na. 17.10.2022


ಜಯ ಕರ್ಣಾಟಕ

ಜಯ ಕರ್ಣಾಟಕ
ಜಯ ಕರ್ಣಾಟಕ
ಜಯ ಕರ್ಣಾಟಕ
ಜಯ ಜಯ ಹೇ

ಗಂಧದ ಬೀಡಿದು
ಚಂದದ ನಾಡಿದು
ಶಾಂತಿಯ ನೆಲೆಯಿದು
ಭುವಿಯೊಳಗೆ

ಜೋಗದ ಜಲಸಿರಿ
ಗಿರಿವನಸುಮಗಳು
ಬಾಗುತ ಬೀಗುತ
ಶೋಭಿಸುತಿರಲು
ಬೃಂದಾವನದಲಿ
ಚಿಲುಮೆಯ ಚಿಮ್ಮಿಸಿ
ರಂಜಿಸಿ ಧುಮುಕುವ
ಧಾರೆಯ ಜಲವಿಹ
(ಜಯ)

ಮಲೆನಾಡಿನಗಿರಿ
ವನಗಳ ತಂಪಿನ
ಅಲೆಕಡಲ್ಗಳ
ಗಂಭೀರದ ಸೊಂಪಿನ
ಶಿಲೆಗಳ ಸುಂದರ
ದೇಗುಲ ಭವ್ಯ
ಕಲೆಗಳ ಅಂದದ
ನೆಲೆಬೀಡಾಗಿಹ
(ಜಯ )

ಕೊಡಗಿನ ವೀರ
ಸಾಹಸ ಸುಪುತ್ರರ,
ಕೊಡುಗೆಯುಮ್
ದೇಶದ ರಕ್ಷಕರೆನಿಸಿಹ ,
ದೇಶಪ್ರೇಮದ
ಧ್ವಜವನು ಏರಿಸಿ ,
ಆಶಿಸಿ ಮೆರೆದ
ಅರಸರ ನಾಡಿದು,
ಆಶಿಸಿ ಮೆರೆದ
ಅರಸಿಯರ ನಾಡಿದು
(ಜಯ ಕರ್ಣಾಟಕ )

– ಶ್ರೀಮತಿ
ಯದುಗಿರಿ ಶ್ರೀನಿವಾಸನ್


ಇಂದು ಬೆಳಗಾಗಿದೆ

ಇಂದು ಬೆಳಗಾಗಿದೆ
ಇಂತಹ ಸೊಬಗಿದೆ
ಕರಾಳ ರಾತ್ರಿಯಾದರೂ ಸರಿ
ನಿರ್ಮಲ ರಾತ್ರಿಯಾದರೂ ಸರಿ
ಬೆಳಕು ಮೂಡಿದೆ ನೋಡಲ್ಲಿ

ಕತ್ತಲೆ ಬೆಳಕುಗಳ ನಡುವೆ
ಓಲಾಡುತಿದೆ ಈ ಜೀವ
ಒಮ್ಮೆ ಸುಖ
ಒಮ್ಮೆ ದುಃಖ
ಕಳೆಯ ಬೇಕಲ್ಲವೇ
ಈ ಪ್ರಕೃತಿಯ ಲೀಲೆಗಳು

ಹಸಿರು ಉಸಿರು ಸರಿಸಮ
ಬಣ್ಣಿಸಿ ಹರಿಯ ನಾಮ
ಕಾರ್ಯದಲ್ಲಿ ತೊಡಗಬೇಕಿನ್ನು
ಮನುಜ ಸಮಯೋಚಿತವಾದನ್ನು

– ಡಾ. ಆರ್ ಎಂ ಲಲಿತ