ಐದು ಬಂಗಾರದ ಬಾಣಗಳು

– Padmasini.M.A

ಇದು ಮಹಾಭಾರತ ಯುದ್ಧ ನಡೆಯುವಾಗ ಆದ ಒಂದು ಸ್ವಾರಸ್ಯವಾದ ಘಟನೆ.

ಒಮ್ಮೆ ಪಾಂಡವರು ಮತ್ತು ಕೌರವರು ಒಂದು ಕೊಳದ ಬಳಿ ವಾಸವಾಗಿದ್ದರು. ಆ ಕೊಳದಲ್ಲಿ ಗಂಧರ್ವರು ಜಲಕ್ರೀಡೆಗೆ ಬಂದಿದ್ದರು. ಆಗ ಧುರ್ಯೋಧನನು ಸುಮ್ಮನೆ ಇರದೆ ಗಂಧರ್ವನೊಂದಿಗೆ ವಾಗ್ವಾದಕ್ಕೆ ಇಳಿದನು. ಆಗ ಗಂಧರ್ವರೆಲ್ಲರೂ ಸೇರಿ ಧುರ್ಯೋಧನನ್ನು ಚೆನ್ನಾಗಿ ಸದೆಬಡಿದು ಅವನನ್ನು ಅಪಹರಿಸಿಕೊಂಡು ಹೋಗಲು ತಯಾರಿ ಮಾಡತ್ತಿದ್ದರು. ಆ ಸಮಯಕ್ಕೆ ಸರಿಯಾಗಿ ಅರ್ಜುನನು ಅಲ್ಲಿ ಬಂದನು. “ಅಯ್ಯೋ ಏನಿದು? ಧುರ್ಯೋಧನನ್ನು ಹೀಗೆ ಅಪಹರಿಸಿಕೊಂಡು ಹೋಗಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ! ಇದನ್ನು ನಾನು ಹೋಗಿ ತಡೆಯುತ್ತೇನೆ” ಎಂದು ಅರ್ಜುನನು ಹೋಗಿ zಗಂಧರ್ವರೊಡನೆ ಮಾತನಾಡಿ ಧುರ್ಯೋಧನನ್ನು ಗಂಧರ್ವರಿಂದ ಬಿಡಿಸಿಕೊಂಡು ಬಂದನು.

ಧುರ್ಯೋಧನನಿಗೆ ಬಹಳ ಸಂತೋಷವಾಗಿ, “ಅರ್ಜುನ, ನೀನು ಸರಿಯಾದ ಸಮಯಕ್ಕೆ ಬಂದು ನನ್ನನ್ನು ಕಾಪಾಡದೆ ಇದ್ದರೆ, ಗಂಧರ್ವರು ನನ್ನನ್ನು ಅಪಹರಿಸಿಕೊಂಡು ಹೋಗುತ್ತಿದ್ದರು. ನಿನಗೆ ನನ್ನಿಂದ ಏನಾದರೂ ಬೇಕಾದರೆ ಕೇಳು.” ಎಂದನು. ಅದಕ್ಕೆ ಅರ್ಜುನನು, “ಈಗ ನನಗೆ ಏನೂ ಬೇಡ. ಸಮಯ ಬಂದಾಗ ಕೇಳುತ್ತೇನೆ” ಎಂದನು.

ಕುರುಕ್ಷೇತ್ರದಲ್ಲಿ ಯುದ್ಧವು ಪ್ರಾರಂಭವಾಯಿತು. ದಿನಗಳು ಕಳೆದರೂ ಪಾಂಡವರಲ್ಲಿ ಯಾರೂ ಹತರಾಗಿರಲಿಲ್ಲ. ಹೀಗೆಯೇ ಸಾಗುತ್ತಿದ್ದರೆ ಮುಂದೆ ನಮಗೆ ಪರಾಜಯ ನಿಶ್ಚಯ ಎಂದು ಧುರ್ಯೋಧನನಿಗೆ ಬಹಳ ಚಿಂತೆಯಾಯಿತು.

ಅವನು ಭೀಷ್ಮರಲ್ಲಿ ಹೋಗಿ, “ಏನಿದು ಪಿತಾಮಹರೆ! ನಿಮಗೆ ಪಾಂಡವರ ಮೇಲೆ ಪ್ರೀತಿ ಹೆಚ್ಚಾಗಿದೆಯೆ? ನಿಮ್ಮಂತಹ ಮೇಧಾವಿಗಳಿದ್ದರೂ ಯಾಕೆ ಇನ್ನೂ ಒಬ್ಬ ಪಾಂಡವರಾದರೂ ಹತರಾಗಿಲ್ಲ? ಇದಕ್ಕೆಲ್ಲ ನಿಮಗೆ ಅವರ ಮೇಲಿರುವ ಅಭಿಮಾನ ಅಲ್ಲವಾ?” ಎಂದು ಸಿಡಿದಾಡುತ್ತಾನೆ.

ಈ ಅಪವಾದವನ್ನು ತಡೆಯಲಾರದೆ ಭೀಷ್ಮ ಪಿತಾಮಹರು, “ಸರಿ ಹಾಗಾದರೆ, ಧುರ್ಯೋಧನ, ಹೋಗಿ ಅಲ್ಲಿ ಐದು ಬಂಗಾರದ ಬಾಣಗಳನ್ನು ಇಟ್ಟಿದ್ದೇನೆ, ತೆಗೆದುಕೊಂಡು ಬಾ” ಎಂದು ಆದೇಶಿದರು. ಇದನ್ನು ಕೇಳಿ ಧುರ್ಯೋಧನನಿಗೆ ಬಹಳ ಆನಂದವಾಯಿತು. ನಾಳೆ ಭೀಷ್ಮ ಪಿತಾಮಹರು ಈ ಐದು ಬಂಗಾರದ ಬಾಣಗಳಿಂದ ಆ ಐದು ಪಾಂಡವರನ್ನ ಸಂಹರಿಸುತ್ತಾರೆ. ಹಾಗಾದರೆ ನಾಳೆ ಆ ಪಾಂಡವರೆಲ್ಲ ಹತರಾಗುವುದರಲ್ಲಿ ಸಂದೇಹವೇ ಇಲ್ಲ! ಎಂದು ಬಹು ಸಂತೋಷಪಟ್ಟನು.

ಧುರ್ಯೋಧನನು ಆ ಐದು ಬಂಗಾರದ ಬಾಣಗಳನ್ನು ತೆಗೆದುಕೊಂಡು ಬಂದು ಭೀಷ್ಮರಿಗೆ ಕೊಟ್ಟನು. ಆದರೂ ಧುರ್ಯೋಧನನಿಗೆ ಸಂದೇಹವಿತ್ತು.

ಅವನು, “ಪಿತಮಹರೇ, ಎಲ್ಲಿ ಆ ಐದು ಬಂಗಾರದ ಬಾಣಗಳನ್ನು ಕೊಡಿ. ನನ್ನ ಹತ್ತಿರ ಇಟ್ಟುಕೊಂಡಿರುತ್ತೇನೆ. ನಾಳೆ ಯುದ್ಧಕ್ಕೆ ಹೊರಡುವಾಗ ನಿಮಗೆ ಕೊಡುತ್ತೇನೆ” ಎಂದನು. ಅದಕ್ಕೆ ಭೀಷ್ಮರು ಒಪ್ಪಿ ಆ ಬಾಣಗಳನ್ನು ಧುರ್ಯೋಧನನಿಗೆ ಕೊಟ್ಟರು.

ಮರುದಿನ ಮುಂಜಾನೆಯೇ ಕೃಷ್ಣನು ಅರ್ಜುನನನ್ನು ಕರೆದು, “ಅರ್ಜುನ, ಧುರ್ಯೋಧನನ ಹತ್ತಿರ ಹೋಗಿ ನಿನಗೆ ವರ ಕೊಟ್ಟಿದ್ದನಲ್ಲಾ ಅದನ್ನು ಈಗ ಪೂರೈಸು ಎಂದು ಕೇಳು. ಅವನು ಏನು ಬೇಕು ಎಂದು ಕೇಳಿದಾಗ ಆ ಐದು ಬಂಗಾರದ ಬಾಣಗಳನ್ನು ಕೊಡು ಎಂದು ಕೇಳು. ಈಗಲೇ ಹೊರಡು” ಎಂದನು. ಅರ್ಜುನನು ಕೃಷ್ಣ ಗೂಡಾರ್ಥ ಏನೂ ತಿಳಿಯದೆ ಮುಖವನ್ನು ಪ್ರಶ್ನಾರ್ಥವಾಗಿ ಇಟ್ಟುಕೊಂಡು ಹೊರಟನು.

ಅರ್ಜುನನು ಧುರ್ಯೋಧನನ ಹತ್ತಿರ ಹೋಗಿ, “ಧುರ್ಯೋಧನ, ನಾನು ನಿನ್ನನ್ನು ಗಂಧರ್ವರಿಂದ ಕಾಪಾಡಿದ್ದಾಗಿ ಒಂದು ವರವನ್ನು ಕೊಟ್ಟಿದ್ದೆಯಲ್ಲಾ, ಅದನ್ನು ಈಗ ಪೂರೈಸು” ಎಂದನು.

ಅದಕ್ಕೆ ಧುರ್ಯೋಧನನು, “ಏನು ಬೇಕು?” ಎಂದನು.

ಅರ್ಜುನ, “ನಿನ್ನ ಹತ್ತಿರ ಇರುವ ಆ ಐದು ಬಂಗಾರದ ಬಾಣಗಳನ್ನು ಕೊಡು” ಎಂದಾಗ ಧುರ್ಯೋಧನನು ಅವಕ್ಕಾದನು. ಆದರೆ ಕೊಟ್ಟ ಮಾತಿಗೆ ಹಿಂತಿರುಗದೆ ಆ ಬಾಣಗಳನ್ನು ಅರ್ಜುನನಿಗೆ ಕೊಡಲೇಬೇಕಾಯಿತು. ಅರ್ಜುನನು ಆ ಬಾಣಗಳನ್ನು ತೆಗೆದುಕೊಂಡು ತನ್ನ ಶಿಬಿರಕ್ಕೆ ಹಿಂತಿರುಗಿದನು.

ಇದು ಹೇಗೆ ಸಾಧ್ಯ? ಅರ್ಜುನನಿಗೆ ನನ್ನಲ್ಲಿ ಬಾಣಗಳಿರುವ ವಿಷಯ ಹೀಗೆ ತಿಳಿಯಿತು? ಆಮೇಲೆ ಯೋಚನೆ ಮಾಡಿದರೆ ಧುರ್ಯೋಧನನಿಗೆ ಎಲ್ಲಾ ವಿಷಯ ತಿಳಿಯಾಯಿತು. ಇದೆಲ್ಲ ಕೃಷ್ಣನ ತಂತ್ರವೇ ಇರಬೇಕೆಂದಕೊಂಡನು.

 


ದೈವಶಿಲ್ಪಿ

–  ಡಾ || ಎಂ.ಎ.ಆರ್.ಅಯ್ಯಂಗಾರ್

೧.  ಕಲ್ಲನ್ನು ಕಲ್ಲೆಂದು ಲೆಕ್ಕಿಸದೆ

ಕಲ್ಲಿನೊಳಗೇನೋ ಅಡಗಿ ಕುಳಿತಿಹುದು

ಒಂದು ಆರಾಧ್ಯಮೂರ್ತಿ ಭಕ್ತನ ಸ್ಫೂರ್ತಿ

ಎಂದು ಕಲ್ಪಿಸಿ ಹೋರಾಡಿದ ಹಗಲಿರುಳೂ ಧೀರಶಿಲ್ಪಿ||

 

೨.  ಮೂಲೆಯಲಿ ಮಲಗಿರುವ ಎಂತದೋ ಕಲ್ಲನ್ನು 

ಎಬ್ಬಿಸಿ, ಹೊಡೆದು, ಬಡಿದು ಜೀವ ತುಂಬಿಸಿ 

ಸೌಂದರ್ಯ ಲೇಪಿಸಿ, ಮೂರ್ತಿಯ ನಿಲ್ಲಿಸಿ,

ದಿವ್ಯ ನಗೆಯ ಹೊರಸೂಸಿ ದೂರದ ಭಕ್ತನನು ಬಳಿಗೆ ಸೆಳೆದಾ ದೈವಶಿಲ್ಪಿ||

 

೩.  ಶಿಲ್ಪಿ ಕೆತ್ತಿದ ಕಲ್ಲು ಪ್ರಸಿದ್ಧ ಮೂರ್ತಿಯಾಯ್ತು

ದೈವವಾಯ್ತು ಮನೆ ಮನೆ ಮಾತಾಯ್ತು

ಭಕ್ತಿಗೆ ಸ್ಫೂರ್ತಿಯಾಯ್ತು ಅನವರತ ಆರತಿಯಾಯ್ತು

ನಿತ್ಯೋತ್ಸವವಾಯ್ತು ಭಕ್ತರ ’ಓ”ಗಳಿಗೆ ಮಾರ್ದನಿಯಾಯ್ತು||

 

೪.  ಶಿಲ್ಪಿಗೊಂದು ಚಣ ಗೊಂದಲವಾಯ್ತು, ಇದೇನಿದು

ನಾನು ದೇವನ ಸಂಜಾತನೋ, ಇಲ್ಲ ದೈವವು

ನನ್ನ ಸೃಷ್ಟಿಯ ಫಲಪ್ರಸಾದವೋ, ಪ್ರಾರ್ಥಿಸಿದ

ದೈವವೇ ಈ ವಿಚಿತ್ರ ಸಮಸ್ಯೆಯಿಂದ

ಮುಕ್ತಿಕೊಡುವೆಯಾ! ನನ್ನ ಕ್ಷಮಿಸುವೆಯಾ ||

 

೫.  ಚಿತ್ರಕಾರರು ಹಚ್ಚುವರು ತಂತಮ್ಮ

ನಾಮಧೇಯವನು ಚಿತ್ರದ ಅಂಚಿನಲಿ

ಲೇಖಕರು ಉಲ್ಲೇಖಿಸುವರು ತಂತಮ್ಮ

ನಾಮಫಲಕವನು ಪುಸ್ತಕದ ಮಸ್ತಕದಲ್ಲೇ

ಆದರೆ, ಈ ದೈವಶಿಲ್ಪಿಗೆ ಸಲ್ಲುವುದು ಕೇವಲ

ಅನಾಮಧೇಯನ ವಿಸ್ಮಯ ಗೆಲುವು ||

(A tribute to the stone sculptors of Mahabalipuram, Tamil Nadu, in the vicinity of  which the author lived for 25 years)


 

ಕುದ್ರೆ ಟೀ

–  ಆರ್..ಕುಮಾರ್

 

ಟೀ ಕುಡಿದಿದ್ದೀಯೇನ್ಲಾ?

ಯಾವ್ ಟೀನ್ಲಾ?

ನೀ ಯಾವ್ಯಾವ್ ಟೀ ಕುಡ್ದಿದ್ದೀಲಾ?

ನಾನು ಕಪ್ ಟೀ, ಕೆಂಪ್ ಟೀ, ಗುಲಾಬಿ ಟೀ, ಮಸಾಲಾ ಟೀ, ನಿಂಬೂ ಟೀ ಇಂಗೇ ತರಾವರೀ ಟೀ ಕುಡ್ದೀನಿ ಕಲಾ.

ಊಂ ಇಂಗೇ ಬಾಲಾ ಬೆಳಿಸ್ತಾ ಓಗ್ಲಾ, ಇನ್ನೂ ಅದೆದೆಂತಾ ಟೀ ಕುಡೀಸ್ತೀಯೋ ನೀನು?

ನಾನೇನ್ ಏಳ್ಬಾರದ್ ಏಳಿದ್ನಾ, ಅಂಗ್ಯಾಕ್ ಮೈಮ್ಯಾಗ ದೆವ್ ಬಂದವ್ನಂಗಾಡೀಯೇ?

ತೆಪ್ಪಾಯ್ತು ಕನ ಮುಂದ್ಕೇಳು.

ನೋಡಪಾ ನಿಂ ತಾತ್ನ ಕಾಲ್ದಾಗೆ ಒಂದೈಟಂಗೆ ಒಂದೇ ಎಸ್ರು ಅಲ್ವಾ?

ಔದು ಮಂತೇ, ಒಂದ್ ಸಾಮಾನ್ಗೆ ಒಂದೆಸ್ರು ಇರ್ಬೇಕಲ್ವಾ? ಎಕ್ಸೈಜು, ಅಕ್ಕಿ, ಬ್ಯಾಳೆ, ಉಪ್ಪು ಇವ್ಕೇನ್ ಎಲ್ಡೆಡ್ ಎಸ್ರು ಮಡ್ಗೋಗಾಯ್ತದಾ? ಅಲ್ಲೇ ನೀ ತೆಪ್ ತಿಳ್ಕಂಡಿರೋದು.ನೀ ಏಳ್ದ್ಯಲ್ಲಾ ಆ ಕಾಲ್ದಾಗೆ ಈ  ಬ್ರ್ಯಾಂಡುಗ್ಳು ಇರ್ತಾಯಿರ್ನಿಲ್ಲ; ಈಗ್ನೋಡು ಸಿವ್ಲಿಂಗು ಬೇಳ್ಯಂತೆ, ಬಸ್ವೇಸ್ವರ ಅಕ್ಕ್ಯಂತೆ, ಟಾಟಾ ಉಪ್ಪಂತೆ ಇಂಗೆ ಎಲ್ಲಾದ್ರಾಗೂ ಅತ್ತಾರು ಕಂಪನೀಗ್ಳು ಉಟ್ಕಂಡವೆ. ಅಂಗಾಗಿ ಬರೀ ಬ್ಯಾಳೆ ಅನ್ನಂಗಿಲ್ಲ, ಯಾವ್ ಕಂಪ್ನಿ ಬ್ಯಾಳೆ ಅಂತಾನೂ ಏಳ್ಬೇಕು.

ಇಸ್ಯ ಎಲ್ಲೆಲ್ಲೋ ಓಯ್ತಾ ಐತೆ. ಅದೇನೋ ಒಸ್ಸೊಸ್ ಟೀ ಬಗ್ಗೆ ಏಳ್ತಾ ಇದ್ದೆ , ಅದ್ರಾಗೆ ಇನ್ನೂ ಏನೇನದೆ?

ಅಯ್ಯೋ ಬುಡಪ್ಪಾ ಅದೇನ್ ಕೇಳ್ತೀ. ಜನ್ಗಳ್ ನಾಲ್ಗೆ ಕೆಟ್ ಕೆರ ಇಡ್ದೋಗೈತೆ. ಏನ್ ಕೊಟ್ರೂ ಬಾಯ್ ಚಪ್ಪರಿಸ್ಕೊಂಡ್ ತಿಂತಾವೆ, ಕುಡೀತಾವೆ. ಅದ್ಯಾವ್ದೋ ಚಿನ್ಮಾದಾಗೆ ದೊಡ್ಡಣ್ಣ ಇಂದಿನ್ ಜಿನ್ದ ಉಳ್ದೋಗಿದ್ ಇಡ್ಲಿ, ವಡೆ, ದ್ವಾಸೆ ಮಂತೆ ಪೂರ್ಯ ಸೇರ್ಸಿ ಕಲ್ಸಿ ಕರ್ದು ಒಸಾ ಉಪ್ಪಿಟ್ಟು ಉರುಫ್ ಬಾತು ‘ಇವದೋಪೂ’ ಮಾಡಿ ತಿನ್ಸಿದ್ದು ನೋಡಿಲ್ವಾ? ಅಂಗೇ ಅವ್ರು ಆಕಿದ್ದೇ ಐಟಂ, ಕುಡ್ಸಿದ್ದೇ ಕುಡ್ಸಿದ್ದು! ಟೀ ಅನ್ನೋದ್ಕೆ ಪುದೀನಾ ಸೊಪ್ಪು ಒಬ್ರಾಕಿದ್ರೆ, ಇನ್ನೊಬ್ರು ಯಾಲಕ್ಕೀನೇ ಆಕ್ಬೌದು! ಇತ್ತೀಚ್ಗೆ ಒಬ.

ಏನದ್ರ ಎಸ್ರೂ?

ಕುದ್ರೆ ಟೀ ಅಂತಾ!

ಅಂದ್ರೇ ಕುದ್ರೇದೇನಾರಾ ಆಕಿ ಟೀ ಮಾಡಾರಾ? ನಂ ಜಗ್ಗೇಸಣ್ಣನ್ ಬೌ ಬೌ ಬಿರ್ಯಾನೀ ತರಾನಾ? ಅಂಗೆಲ್ಲಾ ಅದು ‘ಎನ್.ವೀ’ ಟೀ ಅಲ್ಲಾ, ಪ್ಯೂರ್ ‘ವೀ’ ಟೀ ಕಲಾ. ಅದು ಕುದ್ರೇ ತಿನ್ತದಲ್ಲಾ  ಅದೇ ಉರ್ಳೀ ಆಕಿ ಮಾಡೋ ಟೀ! ಅಂದ್ರೆ ಉಳ್ಳೀ ಟೀ! ನಾನೇನೇನೋ ಅಂಕೊಂಬುಟ್ಟು ಜೀಮ ಬಾಯಿಗ್ಬಂದ್ಬುಟ್ಟಿತ್ತು. ಸರೀ ಉಳ್ಳೀನ ಏನ್ಮಾಡ್ಬೇಕಂತ್ಲಾ?  ಅದ್ನ ಉರ್ದು ಕುಟ್ಟಿ ಪುಡೀಮಾಡಿ ಕುದ್ಯೋ ನೀರ್ಗಾಕಿ ಬಸ್ದು ಅದ್ರ ಸಾರಾ ಮಾತ್ರಾ ಕುಡೀಬೇಕಂತೆ, ಸಕ್ರೆ ಆಕ್ಬಾರ್ದಂತೆ! ಕುಡ್ದ್ರೆ ಏನೇನೋ ಕಾಯ್ಲೇಗ್ಳು ಓಯ್ತಾವಂತೇ, ಅದೇನೇನ್ ಕಾಯ್ಲೇ ಬತ್ತದೋ ಯಾರೂ ಏಳ್ತಾಯಿಲ್ಲ, ಒಂದಸ್ಟ್ ಜಿನ ಕುಡ್ದ್ಮ್ಯಾಗೆ ತೀಳೀಬೌದು.

ಈಗ್ನೋರು ಬೊಲೇ ಬುದ್ವಂತ್ರು ಅನ್ಕೊಂಡ್ಬುಟ್ಟವ್ರೆ  ಈರೇಕಾಯ್ ಸಿಪ್ಪೇ ಸಟ್ನಿ ಸಂದಾಕಿರ್ತದೆ ಅಂತಾ ಯಾರೋ ಏಳ್ದ್ರೂ ಅಂತಾ ಪ್ಯಾಟೆ ಸೊಸೆ ನಾಕ್ ಈರೇಕಾಯ್ ತಂದು ಅದ್ರ ಸಿಪ್ಪೇ ಇಟ್ಕಂಡು ಕಾಯಾserf ತಿಪ್ಪೇಗೆಸೆದ್ಲಂತೆ ಅಂಗಾಯ್ತೂ ನೀ ಏಳ್ತಿರೋದು! ಅಲ್ಲಾ ಉಳ್ಳೀಯ ಬೇಸಿ ಸಾರಾ ಮಾಡ್ಕೊಂಡು ಇಟ್ ಜೊತೆ ಉಂಡ್ರೆ ಮಜ್ವಾಗೂ ಇರ್ತೈತೆ, ದೇಹ್ಕೆ ನಾರ್ನಂಸಾನೂ ಸೇರ್ತದೆ. ಅದ ಬುಟ್ಟು ಉಳ್ಳೀ ರಸ ತಕ್ಕೊಂಡು ಚಲ್ಟಾ ಬಿಸಾಕ್ಬುಟ್ರೆ ಅದ್ರಾಗೇನಿರ್ತೈತೆ ಮಣ್ಣು! ಕುದ್ರೇಗೆ ಬರೀ ಸಾರಾಯ್ ಅಲ್ಲಲ್ಲಾ ಸಾರಾ ಕುಡ್ಸ್ತಾರಾ ಪೂರಾ ಉಳ್ಳಿ ತಿನ್ಸಿದ್ರೆ ಅಲ್ವಾ ಸಕ್ತಿ ಬರೋದೂ? ಅದ ಬುಟ್ಟು ಚಲ್ಟ ಬಿಸಾಕ್ತಾರಾ?

ಅದೆಲ್ಲಾ ಬುಡು ಯಾರಾರೂ ಬೇವಿನ್ ಸೊಪ್ಪಾಕಿ ಟೀ ಕುಡ್ಸೋಕ್ಮುಂಚೆ ಕಾಲ್ಕೀಳಾನಾ ನಡೀ ನಡೀ.

 


 

ದಿವ್ಯ ದರ್ಶನ

–  ಮ. ಅ. ನ 06 . 09. 20  M. AN. NA.

1. ಕಂಗೊಳಿಸುತಿರುವ ಸುಂದರ ಕಂಗಳ ನೋಡು ಕಂಗಳೆ,

ಕಂಗೊಳಿಸಿ ಪ್ರಜ್ವಲಿಸುತಿರುವ ದೀಪಗಳ ಬೆಳಕಿನಲಿ –

ಕಂಗೊಳಿಸುತಿರುವ ಜಾಜ್ವಲ್ಯಮಾನವಾದ ಮೂರುತಿಯ ನೋಡು,

ಕಂಗೊಳಿಸುತಿರುವ ಸುಂದರ ಚೆಲುವ ನಾರಾಯಣನ ನೋಡು .

 

2. ಸೂರ್ಯ ಚಂದ್ರರಂತೆ ಹೊಳೆಯುತಿರುವ ಕಂಗಳ ನೋಡು ,

ಕಮಲ ದಳದಂತಿರುವ ಕಮಲನಾಭನ ಕಂಗಳ ನೋಡು ,

ಭವ್ಯ ನಿಲುವಿನಲಿ ನಿಂತ ಚೆಲುವರಾಯನ ಕಂಗಳ ನೋಡು ,

ಭವ ಭಯ ನೀಗಿ ಭಕ್ತಿಭಾವ ಮೂಡಿಸುವ ಕಂಗಳ ನೋಡು .

 

3. ಎತ್ತ ನೋಡಿದರಲ್ಲಿ ಭವ್ಯ ದಿವ್ಯ ವಾತಾವರಣ,

ಅತ್ತ ಚೆಲುವರಾಯನ ಪಾದದಲಿ ಲಕ್ಷ್ಮಿಯ ದಿವ್ಯದರ್ಶನ,

ಮತ್ತೆ ಮೇಲೆ ನೋಡಿದರೆ ಹೃದಯದಲಿ ನೆಲೆಸಿದವಳ ದರ್ಶನ,

ಮತ್ತೆ ಮತ್ತೆ ನೋಡಿದವರ ಮನತುಂಬುವ ಭವ್ಯ ರೂಪ ದರ್ಶನ.

 

4. ಕಂಗೊಳಿಸುತಿರುವ ಹುಣ್ಣಿಮೆ ಚಂದ್ರ ಮುಖಮಂಡಲದ,

ತಂಗಾಳಿಯ ತಂಪು ತರುವ ತುಂಬುಸುಖದನುಭವದ,

ಮಂಗಳ ಮೂರುತಿಯ ನೋಡದವರಿಗೆ ಕಂಗಳೇಕೆ ಬೇಕು ,

ರಂಗನ ದರುಶನ ಮಾಡಿದ ಕಂಗಳಿಗೆ ಮತ್ತೇನು ಬೇಕು.

 

5. ಎತ್ತರದ ಬೆಟ್ಟದ ಮೇಲೆ ಕೋಟೆಯಲಿ ನಿಂತ ಭಗವಂತ,

ಭಕ್ತ ಜನರು ಭಜಿಸಿದ ನರಸಿಂಹ ಯೋಗಮುದ್ರೆಯಲಿ ಕುಂತ ,

ಮುಕ್ತಿ ಪಡೆಯಲು ಅತಿ ಸುಲಭ ಮಾರ್ಗ ಇದುವೆ ಎಂದು,

ಭಕ್ತಿ ಮಾರ್ಗ ತೋರಿದ ನರಹರಿಯ ಕೃಪೆ ಇರಲಿ ಸತತ .

 


 

ಇಂಥಾ ವ್ಯಾಧಿಯ ಕಾಣೆನೋ .

–  ಮ . . ( 05- 03- 2021 )  M . An. Na.

ಪ 1.

ಇಂಥಾ ವ್ಯಾಧಿಯ ಕಾಣೆನೋ ಈ ಜಗದೊಳು

ಅ!ಪ! ಇಂಥಾ ವ್ಯಾಧಿಯ ಜಗದೊಳಗೆಲ್ಲ ಭಯಭೀತರಾಗಿ

ಎಂಥಾ ದಿಗ್ಗಜರನೂ ಬಿಡದೆ ಎಂತೆಲ್ಲಾ ಸತಾಯಿಸಿದ       [ಇಂಥಾವ್ಯಾಧಿಯ]

 

ಪ2.

ಹುಚ್ಚ ಚೀನಾದವನು ಕಿಚ್ಚು ಹಚ್ಚಿಬಿಟ್ಟ,

ಪ್ರಪಂಚದಲೆಲ್ಲಾ ಬಿಚ್ಚಿಬಿಟ್ಟ ವಿಷಾಣುವನು.      [ಇಂಥಾ ವ್ಯಾಧಿಯ.]

 

ಚ1

ನಿಂತು  ದೂರದಲಿ ತಪ್ಪಿಸೋ , ವೈರಾಣುವಿನ  ಸೋಂಕು

ದಪ್ಪದ ಮುಖವಾಡ ಧರಿಸಿ ತಪ್ಪಿಸೋ; ಅಂತೂ ಆಗಾಗ ಕೈಗಳ ಕ್ರಿಮಿನಾಶಕದಲಿ ತೊಳೆದು,

ಕರೋನಾ ಕ್ರೂರಿ ರೋಗದಿಂದ ತಪ್ಪಿಸೋ.    [ ಇಂಥಾ ವ್ಯಾಧಿಯ ]

 

ಚ2

ಮನೆಯಲ್ಲೇ  ಆದಷ್ಟು ನೆಲೆಸೋ, ಸುಮ್ಮನೆ ಹೊರಗೆ ಸುತ್ತುವುದ ನಿಲ್ಲಿಸೋ,

ಹೊರಗೆ ಹೋಗ್ಲೇಬೇಕಾದರೆ,

ಗುಂಪು  ಗದ್ದಲಗಳಿಂದ ದೂರಸರಿದು  ಎಚ್ಚರದಿಂದ ವರ್ತಿಸೋ.     [ಇಂಥಾ ]

 

ಚ3

ವಯಸ್ಸಾದವರ ಅತಿಯಾಗಿ ಗಮನಿಸೋ ,

ಚಿಕ್ಕ ಮಕ್ಕಳನ್ನು ಅಕ್ಕರೆಯಿಂದ ರಕ್ಷಿಸೋ;

ಅಂತೂ ಬಂತೂ ಕೊನೆಗೆ ಹಲವಾರು ಲಸಿಕೆಗಳು ,

ಅಂತ್ಯವಿಲ್ಲದ ವ್ಯಾಧಿಯ.ತೊಲಗಿಸಿ ಓಡಿಸಲು.      [ಇಂಥಾ ವ್ಯಾಧಿಯ ]

 

ಚ4

ಹತ್ತಾರು ಲಸಿಕೆಗಳು

ಬಂದವೆಂದು ನಿಟ್ಟುಸಿರು ಬಿಡಲು ,

ಮತ್ತೊಂದುರೂಪದಲಿ ಭಂಢ ವೈರಾಣು ಮತ್ತೆ ಬರಲು ,

ನರಾರಿ ಕ್ರೂರಿ ಕರೋನಾ ಹತ್ಯೆಗೆ ಮುರಾರಿ ಮೊರೆಹೋಗಿ ,

ನರಹರಿಯ ನಂಬಿ ಬಾಳ ಸಾರ್ಥಕ ಮಾಡಿಕೋ .

 

{ಶ್ರೀ ವಿಜಯದಾಸರ “ಇಂಥಾ ಪ್ರಭುವ ಕಾಣೆನೋ ” ಆಧರಿಸಿ ,ದಾಸರ  ಕ್ಷಮೆ ಬೇಡುತ }


 

ಗೋದಾಗೋವಿಂದ ದಿವ್ಯ ಸಂಗಮ 

– ಮ 02.21 M. AN. NA.

1. ಗೋದಾ ಎಂದರೇನು ಗೋವಿಂದಾ ಎಂದರೇನು,
ಒಬ್ಬರಲೊಬ್ಬರು ಇಬ್ಬರೂ ಇರುವರು , ತಮ್ಮೊಳಗೆ  ತಾನೇ ತಲ್ಲೀನರಾಗಿರಲು ,
ಭಕ್ತ ಭಗವಂತನ ಭವ್ಯ ಬಂಧನದೊಳು.

 

2 .ಜೀವನಮಾರ್ಗವ ತೋರಿಸಿದ ಗೋದಾ,

ಜೀವನಸಾರ್ಥಕ ಮಾಡಿದ ಗೋವಿಂದ, ಜೀವಾತ್ಮಾನುದ್ಧಾರ ಪೇಳಿದ ಗೋದಾ, ಜೀವಾತ್ಮ ತನ್ನೊಳು ಸೇರಿಸಿದ ಗೋವಿಂದ.

 

3. ಗೋದಾ ಲೋಕವೇ ಗೋವಿಂದನ ಲೋಕ,

ಗೋದಾ ಸ್ತುತಿಯೇ ಗೋವಿಂದನ ಸ್ತುತಿ, ಗೋದಾ ಗೋವಿಂದರ ದಿವ್ಯ ಸಂಗಮದಲಿ,

ನರಹರಿ ಕರುಣೆ ಪರಿಪೂರ್ಣವಾಗಿರಲಿ.

 


 

ಇಪ್ಪತ್ತು ಇಪ್ಪತ್ತ್ತೊಂದು 

–  ಮ . .01.2021. M.AN.NA.

 

1. ಇಪ್ಪತ್ತಿನಲಿ ನೊಂದು,

ಇಪ್ಪತ್ತೊಂದರಲಿ ನಿಂದು,

ಆಪತ್ತಿನಿಂದ ಹೊರಬಂದು ,

ನೋಡುತಿಹೆವು ಮುಂದು.

 

2. ಭಯ ಭೀತಿಯ ಬಿಟ್ಟು ,

ನಡೆಯಿರಿ ಮುಂದು ,

ದೇವರದಯದಿಂದ,

ಒಳಿತಾಗುವುದು ಬಂಧು .

 

3. ಬಿಡ್ತು ಅನ್ನು ಇಪ್ಪತ್ತು ಇಪ್ಪತ್ತು,

ಸದ್ಯ ಹೋಯ್ತು ಯಡವಟ್ಟು ,

ಎಷ್ಟೊಂದು ಕಷ್ಟಗಳ ಕೊಡ್ತು ,

ಎಷ್ಟು ಜನರನು ಕೊಂಡೊಯ್ತು .

 

4. ಇನ್ನು ಮೇಲಾದರೂ ನಿಟ್ಟುಸಿರು ಬಿಟ್ಟು,

ನೆಮ್ಮದಿಯ ಜೀವನ ನಡೆಸಲು ಬಿಟ್ಟು ,

ತೊಲಗಲಿ ಎಲ್ಲಾ ಸಂಕಷ್ಟಗಳು ಎಂದು ,

ಹರಸಲಿ ನಮ್ಮನು ನರಹರಿ ಎಂದೆಂದೂ.

 

5. ಬಂದಿತು ಹೊಸ ವರುಷ ಇಪ್ಪತ್ತ್ತೊಂದು,

ತಂದಿತು ಹರುಷದ ಸುದ್ದಿಯೊಂದು,

ಬಂದಿರುವುದು ಹೊಸ ಲಸಿಕೆಯೊಂದು,

ಮುಂದಾದರೂ ಸುರಕ್ಷಿತ ಜೀವನ ನಡಸಲೆಂದು.

 

6. ಮುಂದಾಗಿರಿ ಲಸಿಕೆಯ ಸೂಜಿಮದ್ದು ಹಾಕಲು,

ಹಿಂದುಮುಂದು ನೋಡದಿರಿ ಈ ಪರಿಹಾರ ಮಾಡಲು , ಇಂದೇ ಮನೆಮಂದಿಯೆಲ್ಲರ ಆರೋಗ್ಯ ಕಾಪಾಡಲು,

ಮುಂದೆ ನರಹರಿಯ ಕೃಪೆಯೊಡನೆ ಜೀವನ ಸಾಗಿಸಲು .

 


 

ಶ್ರೀಎಂ.ವಿಶ್ವೇಶ್ವರಯ್ಯ  

–  ಮ.. .    M.AN.NA. ೧೫/೦೯/೨೦೨೦  ಅಭಿಯಂತರ ದಿನ Engineers’day

1. ಅದೆಂಥಹ ಅದ್ಭುತ ವ್ಯಕ್ತಿತ್ವವಯ್ಯ

ಇಂಥಹ ಪ್ರಾಮಾಣಿಕ ವ್ಯಕ್ತಿ ಬಲು ಅಪರೂಪವಯ್ಯಾ

 

2. ಅಪಾರ ವಿದ್ಯೆ, ಬುದ್ಧಿ, ನಿಖರ ಆಲೋಚನೆ,

ನಿರ್ದಿಷ್ಟ ಯೋಜನೆ, ಎಲ್ಲದರಲ್ಲೂ ಮುಂದಾಲೋಚನೆ

 

3. ಪ್ರಗತಿಪರ ‘ತಕನಿಕಿ’ಗಳ ನಿಪುಣ ಸಾಮ್ರಾಟ

ರಾಜಸೇವೆಯಲ್ಲಿ ನುರಿತ ‘ದಿವಾನ್ ಅಫ್ ಮೈಸೂರ್’

ದೇಶಪ್ರೇಮ, ಸರಳ ಸಾರ್ಥಕ ಜೀವನ

ಇಂಜಿನಿಯರಿಂಗ್ ಯೋಜನೆಗಳ ಅಗ್ರಗಾಮಿ

 

4. ‘ಭಾರತ ರತ್ನ’ ಕೂಡಿ ಬಿರುದುಗಳ ಸುರಿಮಳೆ

ನೂರೆರಡು ವರುಷಗಳ ತುಂಬು ಜೀವನ

ಜನಸೇವೆಯಲ್ಲಿ ನರಹರಿಯ ಸೇವೆ ಕಂಡ ಧುರೀಣ

ಸರ್ ಎಂ.ವಿ. ಅವರಿಗೆ ನೂರು ನೂರು ನಮನ